ಧರ್ಮಸ್ಥಳ ಪ್ರಕರಣ ವ್ಯವಸ್ಥಿತ ಷಡ್ಯಂತ್ರ, ಎಲ್ಲವೂ ಫೇಕ್ ಈಗಲಾದರೂ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಮುಂದೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.ಅವರು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ, ಉದ್ದೇಶಿಸಿ ಶನಿವಾರ 1.15 ರ ಸಮಯದಲ್ಲಿ ಮಾತನಾಡಿದರು.ಧರ್ಮಸ್ಥಳದಲ್ಲಿ ಅಪರಿಚಿತ ಶವಗಳನ್ನ ಹೂಳಲಾಗಿದೆ ಎನ್ನುವ ಎಸ್ ಐ ಟಿ ತನಿಖೆ ವಿಚಾರ ಇಡೀ ವಿಶ್ವದ ಗಮನ ಸೆಳೆದಿತ್ತು, ಓರ್ವ ಪೌರ ಕಾರ್ಮಿಕನ ಮಾತು ಕೇಳಿಕೊಂಡು ಕೋಟ್ಯಾಂತರ ಭಕ್ತರ ಮನಸ್ಸಿಗೆ ರಾಜ್ಯ ಸರ್ಕಾರ ಘಾಸಿ ಉಂಟು ಮಾಡಿದೆ.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರಾಗಿದ್ದರೆ ಎಂದರು.