ದಾವಣಗೆರೆ:ಮಲೇಬೆನ್ನೂರು ಪಟ್ಟಣದ ಸಂತೆ ಮೈದಾನದಲ್ಲಿನ ಕುರಿ, ಕೋಳಿ ಮಾಂಸದ ಅಂಗಡಿ ಬಳಿ ನಾಯಿಯೊಂದು 5 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ಗುರುವಾರ ನಡೆದಿದ್ದು, ಜನರು ಬಾಲಕನನ್ನು ರಕ್ಷಿಸಿದ್ದಾರೆ. ಬಸವೇಶ್ವರ ಬಡಾವಣೆ ನಿವಾಸಿ ಶಶಿಕುಮಾರ್ ಎಂಬವರ ಪುತ್ರ ಭರತ್ (5) ನಾಯಿ ಕಚ್ಚಿ ಗಾಯಗೊಂಡ ಬಾಲಕ. ಇಲ್ಲಿನ ಸಮದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾನೆ. ಇವನು ಮನೆ ಸಮೀದಲ್ಲೇ ಆಟವಾಡುತ್ತಿದ್ದನು. ಈ ವೇಳೆ ಹಂದಿ ಮರಿಯನ್ನು ತಿನ್ನತ್ತಿದ್ದ ನಾಯಿ ಇದ್ದಕ್ಕಿದ್ದಂತೆ ಬಾಲಕನ ಮೇಲೆ ದಾಳಿ ಮಾಡಿ ಕಚ್ಚಿದೆ. ಕೂಡಲೇ ಬಾಲಕ ಕೂಗಿಕೊಂಡಿದ್ದಾನೆ. ಸ್ಥಳದಲ್ಲಿದ್ದ ಜನರು ನಾಯಿಯನ್ನು ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ. ಅಷ್ಟರೊಳಗೆ ನಾಯಿ ಬಾಲಕನ ತೊಡೆ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.