ಅಂತರಾಜ್ಯ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ನಗರದ ಪೊಲೀಸರು ಯಶಸ್ವಿ ಆಗಿದ್ದಾರೆ. ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಎಗರಿಸುತ್ತಿದ್ದ ಖದೀಮರನ್ನು ಅರೆಷ್ಟ್ ಮಾಡಲಾಗಿದ್ದು, ಎಸ್ಪಿ ರೋಹನ್ ಜಗದೀಶ್ ಅಭಿನಂದಿಸಿದ್ದಾರೆ. ನಿಮ್ಮ ಈ ಯಶಸ್ವಿ ಕಾರ್ಯಾಚರಣೆ ಹೀಗೆ ಮುಂದುವರಿಯಲಿ ಅಂತ ಹಾರೈಸಿದರು.