ರಾಯಚೂರ ಸಮೀಪದ ಮಂತ್ರಾನ್ನಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠದ ಗೋಶಾಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಬೆಂಕಿಗಾಗಿರುವ ಘಟನೆ ಸೋಮವಾರ ಮಧ್ಯಾನ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊಂಕ್ಕಫಫತ್ತಿಕೊಳ್ಳುತ್ತಿದ್ದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಮೇವು ಸುಟ್ಟು ಕರಕಲಾಗಿದೆ. ತಕ್ಷಣಕ್ಕೆ ಸಿಬ್ಬಂದಿಗಳು ಎಲ್ಲಾ ಗೋವುಗಳನ್ನು ಹೊರಗೆ ಬಿಟ್ಟಿದ್ದಾರೆ ಇದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಆದರೆ ಜಾನುವಾರುಗಳು ಮೇಯಿಸಲು ಸಂಗ್ರಹಿಸಿದ್ದ ಎಲ್ಲಾ ಹುಲ್ಲು ಸುಟ್ಟು ಕರಕಲಾಗಿದೆ.