ಮದ್ದೂರಿನಲ್ಲಿ ಮಹಿಳೆ ಕಿರುಚಿದ್ದ ನೋಡಿದರೆ ರಕ್ತ ಕುದಿಯುತ್ತೆ: ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮದ್ದೂರಿನಲ್ಲಿ ಪೊಲೀಸರ ಲಾಠಿ ಏಟಿಗೆ ಮಹಿಳೆ ಕಿರುಚಿದ್ದನ್ನು ನೋಡಿದರೆ ರಕ್ತ ಕುದಿಯುತ್ತೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಹೇಳಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪೊಲೀಸರು ಕಾಂಗ್ರೆಸ್ ಪಕ್ಷದ ಏಜೆಂಟರ ರೀತಿ ವರ್ತಿಸಿ ಗಣೇಶ ಮೆರವಣಿಗೆ ಮಾಡುತ್ತ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದರು.