ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಗಾಂಧಿನಗರದ ಸೆಸ್ಕೋ ಸಿಇಓ ಸೆಂಟರ್ ನ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಇಂಡೋ-ಕೊರಿಯನ್ ಸಮ್ಮಿಟ್ 2025 ಕಾರ್ಯಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನದಲ್ಲಿ ಕೊರಿಯಾ ಈಗಾಗಲೇ ಮಂಚೂಣಿಯಲ್ಲಿದೆ. ನಾವು ದಿನನಿತ್ಯ ಉಪಯೋಗಿಸುವ ಹಲವು ವಿದ್ಯುನ್ಮಾನ ವಸ್ತುಗಳಾದ ಸ್ಯಾಮ್‌ಸಂಗ್, ಕೀಯಾ ಕಾರ್, ಫಿಲಿಪ್ಸ್ ಸೇರಿದಂತೆ ಹಲವು ಕಂಪನಿಗಳು ಕೊರಿಯಾ ದೇಶದ್ದಾಗಿದೆ. ಇದಲ್ಲದೇ ವೈದ್ಯಕೀಯ ಕ್ಷೇತ್ರದ ಹೊಸ ಹೊಸ ಆವಿಷ್ಕಾರಗಳಲ್ಲಿ ಕೊರಿಯಾ ದೇಶದ ಕೊಡುಗೆಯಿದೆ. ಇಂದು ನಡೆದ ಇಂಡೋ-ಕೊರಿಯನ್ ಸಮ್ಮಿಟ್ ಯಶ್ವಸಿಯಾಗಲಿ ಎಂದು ಶುಭಹಾರೈಸಿದೆ.