ತಾಲ್ಲೂಕಿನಾದ್ಯಂತ ಒತ್ತುವರಿ ಆಗಿರುವ ಸರ್ಕಾರಿ ಆಸ್ತಿಗಳನ್ನು ತೆರೆವುಗೊಳಿಸಿ ಮುಂಗಾರು ಮಳೆಯಿಂದ ರೈತರ ಬೆಳೆ ಜನಸಾಮಾನ್ಯರ ಬದುಕನ್ನು ರಕ್ಷಣೆ ಮಾಡುವ ಜೊತೆಗೆ ಹದಗೆಟ್ಟಿರುವ ತಾಲ್ಲೂಕಾಡಳಿತವನ್ನು ಸರಿಪಡಿಸಬೇಕೆಂದು ರೈತ ಸಂಘದಿಂದ ತಾಲ್ಲೂಕು ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಕಂದಾಯ ಉಪ ತಹಸೀಲ್ದಾರ ಪ್ರಭಾಕರ ರವರಿಗೆ ಬುಧವಾರ ಮನವಿ ನೀಡಿ ಒತ್ತಾಯಿಸಲಾಯಿತು. ಮುಂಗಾರು ಮಳೆ ಆರ್ಭಟಕ್ಕೆ ಹೊರ ರಾಜ್ಯಗಳ ಪರಿಸ್ಥಿತಿ ನೋಡಿದರು ಸ್ಥಳಿಯ ಕಂದಾಯ ಅಧಿಕಾರಿಗಳು ಮುಂಜಾಗ್ರತವಾಗಿ ಒತ್ತುವರಿ ಆಗಿರುವ ಕೆರೆ, ರಾಜಕಾಲುವೆಗಳನ್ನು ಸರ್ವೇ ಮಾಡಿಸಿ ಒತ್ತುವರಿ ತೆರೆವುಗೊಳಿಸಿ ಅಭಿವೃದ್ದಿ ಮಾಡದೆ ಬೇಜವಬ್ದಾರಿಯಿಂದ ವರ್ತಿಸಿದರೆ ಮುಂದೆ ಮುಂಗಾರು ಮುನಿದರೆ ರೈತರ ಬೆಳೆ ಹಾಳಾಗುತ್ತದೆ ಎಂದ್ರು