ಹರಟಿ ಅರಣ್ಯ ಜಂಟಿ ಸರ್ವೆ ಅನುಮಾನ ಮೂಡಿದೆ, ರೈತ ಶ್ರೀನಿವಾಸನ್ ಆರೋಪ ಕೋಲಾರ: ತಾಲೂಕಿನ ಹುತ್ತೂರು ಹೋಬಳಿಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ವತಿಯಿಂದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಆದರೆ ಸರಿಯಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಈ ಭಾಗದ ರೈತರಿಗೆ ಕಾಡುತ್ತಿದೆ ಎಂದು ರೈತ ಮುಖಂಡ ಶ್ರೀನಿವಾಸನ್ ತಿಳಿಸಿದರು ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆಯ ಹತ್ತಿರವಿರುವ ದಾಖಲೆ ಪತ್ರಗಳ ಬಗ್ಗೆಯೇ ಅನುಮಾನವಿದೆ ಕಂದಾಯ ಇಲಾಖೆಯಲ್ಲಿ ಪುರಾವೆಗಳೇ ಇಲ್ಲ ಆದರೆ ರೈತರ ಬಳಿ ಸೂಕ್ತವಾದ ದಾಖಲೆಗಳು ಇದ್ದರು ವಿನಾಕಾರಣ ಅರಣ್ಯ ಇಲಾಖೆ ಕಂದಾಯ ಇಲಾಖೆ ಮತ್ತು ಪ