ಕಲಬುರಗಿ : ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಬಿದ್ದಾಪೂರ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಸೆಪ್ಟೆಂಬರ್ 6ರಂದು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಜೆಸ್ಕಾಂ ಮನವಿ ಮಾಡಿದೆ.. ಸೆ4 ರಂದು ಸಂಜೆ 6 ಗಂಟೆಗೆ ಪ್ರಕಟಣೆ ಹೊರಡಿಸಿರೋ ಜೆಸ್ಕಾಂ, ಬಿದ್ದಾಪೂರ ಕಾಲೋನಿ ಫೀಡರ್: ಎನ್.ಜಿ.ಓ ಕಾಲೋನಿ, ಮಾಕಾ ಲೇಔಟ್, ದತ್ತ ನಗರ, ಬಿದ್ದಾಪೂರ ರೈಲ್ವೆ ಟ್ರ್ಯಾಕ್ ಏರಿಯಾ, ಬಿದ್ದಾಪೂರ ರಾಘವೇಂದ್ರ ಕಾಲೋನಿ ಏರಿಯಾ ಸೇರಿದಂತೆ ಇನ್ನಿತರ ಬಡಾವಣೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆಯೆಂದು ಹೇಳಿದ್ದಾರೆ.