ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ 20 ವರ್ಷಗಳಿಂದ ಷಡ್ಯಂತರ ನಡೆಯುತ್ತಿತ್ತು ಆದರೆ ಇದೀಗ ಅದಕ್ಕೆಲ್ಲ ತೆರೆ ಬಿದ್ದಿದೆ ಅಂತ ಶಾಸಕ ಬಾಲಕೃಷ್ಣ ತಿಳಿಸಿದರು. ಮಾಗಡಿ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಸರ್ಕಾರದಲ್ಲೇ ತನಿಖೆ ಮಾಡಬಹುದಾಗಿತ್ತು ಆದರೆ ಅವರು ತನಿಖೆ ನಡೆಸಿರಲಿಲ್ಲ. ನಮ್ಮ ಸರ್ಕಾರ ಎಸ್ಐಟಿ ರಚನೆ ಮಾಡಿ ತನಿಖೆ ನಡೆಸಿ ಸತ್ಯವನ್ನು ಹೊರ ತಂದಿದೆ ಅಂತ ಹೇಳಿ ತಿಳಿಸಿದರು.