ತಾಲೂಕಿನ ಮಿಟ್ಟಿ ಮಲ್ಕಾಪುರದಲ್ಲಿ ನಿಯಮಬಾಹಿರವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿರುವ ತಪ್ಪಿತಸ್ಥರೆಲ್ಲರ ಗಣಿಗಾರಿಕೆ ಪೀಡಿತ ಇಡೀ ಪ್ರದೇಶದ ಮೇಲೆ ಸ್ಥಳದಲ್ಲೆ ಕೇಸ್ ದಾಖಲಿಸಿದ ಘಟನೆ ಆಗಸ್ಟ್ 30 ರ ಶನಿವಾರ ಬೆಳಗ್ಗೆ ನಡೆಯಿತು. ಕಾನೂನುಬದ್ದವಾಗಿ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಕಂಡುಬಂದರೆ ಗಣಿಗಾರಿಕೆಗೆ ಸಂಬಂಧಿಸಿದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಮೇಲೂ ಕೇಸ್ ದಾಖಲಿಸಲಾಗುವುದು ಎಂದು ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕರಾದ ನ್ಯಾಯಾಧೀಶರಾದ ರಮಾಕಾಂತ ಚವ್ಹಾಣ್, ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕರು ಆಗಿರುವ ನ್ಯಾಯಾಧೀಶರಾದ ಅರವಿಂದ, ರಾ