ಹಾವೇರಿ ಹೊರವಲಯದಲ್ಲಿರುವ ಐತಿಹಾಸಿಕ ಹೆಗ್ಗೇರಿ ಕೆರೆಯನ್ನು ಸರ್ವೇ ಮಾಡಿಸಿ, ಹದ್ದುಬಸ್ತು ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘ ಜಿಲ್ಲಾಘಟಕದ ಮುಖಂಡರು ಶನಿವಾರ ನಗರದ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಲ್.ನಾಗರಾಜ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಫಕೀರಗೌಡ ಗಾಜೀಗೌಡ್ರ, ಹಾವೇರಿ ನಗರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹೆಗ್ಗೇರಿ ಕೆರೆಯು ಒಟ್ಟು681 ಎಕರೆ 7 ಗುಂಟೆ ವಿಸ್ತೀರ್ಣ ಹೊಂದಿದೆ. ಕೆರೆಯನ್ನು ಸರ್ವೇ ಮಾಡಿಸಿ ಹದ್ದುಬಸ್ತ ಮಾಡಿಸಬೇಕು ಎಂದು ಹೇಳಿದರು.