ಹೊಸದುರ್ಗ ತಾಲ್ಲೂಕಿನ ಸೋಮವಾರ ಮಧ್ಯಾಹ್ನ 12 ಗಂಟೆಗೆ ಭದ್ರಾ ಕೆನಾಲ್ ನಲ್ಲಿದ್ದ ಸೀಪೇಜ್ ಹಾಗೂ ಮಳೆ ನೀರನ್ನ ಟ್ರೈಯಲ್ ರನ್ ಮಾಡಲಾಯ್ತು. ಕೆರೆ ತುಂಬಿಸುವ ಕಾಮಗಾರಿ ಮುಕ್ತಾಯವಾಗಿರುವ ಕಾರಣದಿಂದ ಆರಂಭಿಕವಾಗಿ ಟ್ರೈಯಲ್ ರನ್ ಮಾಡಲಾಯಿತು. ತಾಲ್ಲೂಕಿನ ಜಾನಕಲ್ ಕೆರೆ, ದೇವಪುರ, ರಂಗವ್ವನಹಳ್ಳಿ, ಕೋಡಿಹಳ್ಳಿ, ಕಂಠಪುರ, ಸೇರಿ ಹಲವು ಕೆರೆಗಳಿಗೆ ಟ್ರೈಯಲ್ ರನ್ ಮಾಡಲಾಯ್ತು. ಹೊಸ ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ಹರಿದು ಬಂದಿದ್ದು, ಸಾರ್ವಜನಿಕರು ಹಾಗೂ ರೈತರಲ್ಲಿ ಸಂತಸ ಮನೆ ಮಾಡಿತ್ತು.