ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮ ದಲ್ಲಿ ಚಿನ್ನದಂಗಡಿ ಕಳ್ಳತನ ಮಾಡಲು ಹೋಗಿ ಕೃತ್ಯವನ್ನು ಕಂಡ ಹೋಟೆಲ್ ಮಾಲೀಕನ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಯೊಬ್ಬನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಬಳಿ ಜರುಗಿದೆ. ಪ್ರಕರಣದ ಪ್ರಮುಖ ಆರೋಪಿ ಮಂಡ್ಯ ತಾಲ್ಲೂಕು ಈಚಗೆರೆ ಗ್ರಾಮದ ಕಿರಣ್ ಎಂಬಾತ ಭೀಮನಹಳ್ಳಿ ಬಳಿ ಅಡಗಿ ಕೊಂಡಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ತಡರಾತ್ರಿ 8.45 ರ ಸಮಯದಲ್ಲಿ ಹಲಗೂರು ಸಿಪಿಐ ಶ್ರೀಧರ್, ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.