Download Now Banner

This browser does not support the video element.

ಚಿಕ್ಕಮಗಳೂರು: ತೆಂಗು ಬೆಳೆಗಾರರಿಗೆ ಬಂಪರ್: ಗ್ರಾಹಕರ ಜೇಬು ಪಂಚರ್ - ಹಬ್ಬದ ಹೊತ್ತಲ್ಲಿ ಶಾಕ್ ನೀಡಿದ ತೆಂಗಿನಕಾಯಿ.!

Chikkamagaluru, Chikkamagaluru | Aug 23, 2025
ಗೌರಿ ಗಣೇಶ ಹಬ್ಬಕ್ಕೆ ಮನೆಮನೆಗಳಲ್ಲಿ ಸಿದ್ಧತೆಗಳು ಜೋರಾಗಿದೆ. ಬಾಗಿನ ನೀಡುವುದರಿಂದ ಹಿಡಿದು ಹಬ್ಬದ ಬಗೆಬಗೆಯ ಅಡುಗೆ ಹಾಗೂ ಪೂಜಾ ಕಾರ್ಯಗಳಿಗೆ ತೆಂಗಿನಕಾಯಿ ಮುಖ್ಯ ಪಾತ್ರವಹಿಸುತ್ತದೆ. ಆದರೆ ಈ ಬಾರಿ ತೆಂಗಿನಕಾಯಿ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಸಣ್ಣ ಗಾತ್ರದ ತೆಂಗಿನಕಾಯಿ ₹45ರಿಂದ ₹50 ರೂ. ವರೆಗೆ ಮಾರಾಟವಾಗುತ್ತಿದ್ದು, ಉತ್ತಮ ಗುಣಮಟ್ಟದ ತೆಂಗಿನಕಾಯಿ ₹70ರಿಂದ ₹85 ರೂ. ಬೆಲೆ ಇದೆ. ಕಳೆದ ವರ್ಷ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ 25ರಿಂದ 30ರೂ. ಇದ್ದ ಕಾಯಿ ಬೆಲೆ ಈ ಬಾರಿ ದ್ವಿಗುಣಗೊಂಡಿದೆ. ಬೆಳೆಗಾರಿಗೆ ಇದು ವರದಾನವಾಗಿದ್ದರೆ ಗ್ರಾಹಕರಿಗೆ ಮಾತ್ರ ಬೆಲೆ ಏರಿಕೆ ಬಿಸಿ ಮುಟ್ಟಿದೆ.ಹಬ್ಬದ ಸಂದರ್ಭದಲ್ಲಿ ತೆಂಗಿನಕಾಯಿ ಬೇಕೆ ಬೇಕು ಹೀಗಾಗಿ ಬೆಲೆ ಎಷ್ಟೇ ಇದ್ದರೂ
Read More News
T & CPrivacy PolicyContact Us