ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ ರೈಲ್ವೇ ಸ್ಟೇಶನ್ ಬಳಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಆರೋಪದಲ್ಲಿ ಬಿಹಾರದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಅರ್ನೌಟ್ ಗ್ರಾಮದ ಹರ್ಷ ಕುಮಾರ್ (22 ) ಮತ್ತು ಶಾಪುರ್ ಗ್ರಾಮದ ಅಮರ್ ಕುಮಾರ (28) ಬಂಧಿತ ಆರೋಪಿಗಳು.