ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಕುಡಿಯುವ ಕಾವೇರಿ ನೀರು ರಸ್ತೆ ಮೇಲೆ ಹರಿದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಪೈಪ್‌ಲೈನ್ ಒಡೆದು ನೀರು ಪೊಲಾಗುತ್ತಿದ್ದು ಸರಿಪಡಿಸಿ ಎಂದು ಹಲವು ಸಲ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾರು ಇತ್ತ ಕಡೆ ಗಮನಹರಿಸುತ್ತಿಲ್ಲ. ಜನರ ಸಮಸ್ಯೆ ಆಲಿಸುವಲ್ಲಿ ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ. ಪೈಪ್‌ಲೈನ್ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇದ್ದು ಈ ರಸ್ತೆಯ ಮೂಲಕ ನಿತ್ಯ ಸಾವಿರಾರೂ ವಾಹನಗಳು ಸಂಚಾರ ಮಾಡುವುದರಿಂದ ರಸ್ತೆ ಮೇಲೆ ನೀರು ಹರಿದು ರಸ್ತೆಯೂ ಹಾಳಾಗುತ್ತಿದೆ.