ಚಿತ್ರದುರ್ಗ:-ನಿರಂತರ ಮಳೆಯಿಂದ ಬರದ ನಾಡಿನ ಮೊಳಕಾಲ್ಮುರು ತಾಲೂಕಿನ ಏಕೈಕ ರಂಗಯ್ಯನದುರ್ಗ ಜಲಾಶಯ ಭರ್ತಿಯಾಗಿದ್ದು,ಒಳ ಹರಿವಿನ ಪ್ರಮಾಣ ಹೆಚ್ಚಾಗಿ ಜಲಾಶಯದ ಗೇಟ್ ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದ್ದು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಡ್ಯಾಂ ವ್ಯಾಪ್ತಿಯ ರೈತರ ಉಪಯೋಗಕ್ಕೆ ಸಿಗದದೇ ಅಪಾರ ಪ್ರಮಾಣದ ನೀರು ಆಂಧ್ರ ಪಾಲಾಗುತ್ತಿದೆ. 1977ರಲ್ಲಿ ಈ ಜಲಾಶಯ ನಿರ್ಮಾಣ ಮಾಡಲಾ ಗಿದೆ. 33 ಅಡಿ(ಅರ್ಧ ಟಿಎಂಸಿ)ನೀರು ಶೇಖರಣೆಯ ಸಾಮರ್ಥ್ಯ ಹೊಂದಿರುವ ಈ ಡ್ಯಾಂ 2009ರಿಂದ ಸತತವಾಗಿ ಮೂರು ಬಾರಿ ಹಾಗೂ 2022, 2024ರಲ್ಲಿ ಬಾಗಿನ ಸಲ್ಲಿಸಲಾಗಿತ್ತು, ಈಗ ಮತ್ತೊಮ್ಮೆ ಭರ್ತಿಯಾಗಿ ಬಾಗಿನಕ್ಕೆ ಸಜ್ಜಾಗಿದೆ.