ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಕೋಡಿಗಲ್ ರಮೇಶ್ ರಾಜ್ಯ ಮುಖಂಡರ ಆದೇಶದಂತೆ ಕೆಲಸ ಮಾಡಲಾಗುವುದು,ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇಲ್ಲ ಆದರೆ ಪ್ರತಿ ಗ್ರಾಮದಲ್ಲಿ ಸಭೆ ಸಮಾವೇಶಗಳ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷವನ್ನು ಸಂಘಟಿಸಲಾಗುವುದು ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಲಾಗುವುದು ಮುಂಬರುವ ಗ್ರಾಮ ಪಂಚಾಯ್ತಿ,ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದರು.