ಕೆಪಿಎಸ್ ಹಾಗೂ ಬಹುಭಾಷಾ ಶಾಲೆಗಳ ನಡುವಿನ ತಾರತಮ್ಯ ಸರಿಪಡಿಸಿ ಹಾಗೂ ಹೆಚ್ಚುವರಿ ಹುದ್ದೆಯೆಂದು ಶಿಕ್ಷಕರ ವರ್ಗಾವಣೆ ಮಾಡದಿರಿ ಎಂದು ಸರ್ಕಾರಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.ಹೊಸನಗರ ತಾಲೂಕು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಶಾಲಾ ವಿರೋಧಿ ಸಮಿತಿಯ ಅಧ್ಯಕ್ಷ ಕೆ.ಕೆ.ಅಶ್ವಿನಿ ಕುಮಾರ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆಯನ್ನು ನಡೆಸಿದ್ದಾರೆ. ಮಳೆಯನ್ನ ಲಕ್ಕಿಸದೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದು ನಮಗೆ ಮೊಟ್ಟೆ ಬೇಡ ಒಳ್ಳೆಯ ಶಿಕ್ಷಣ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.