ಪ್ರತಿ ಆರು ತಿಂಗಳಿಗೊಮ್ಮೆ ಒಬ್ಬರು ಸನ್ಯಾನಿಸಗಳನ್ನು, ಒಬ್ಬರು ಧಾರ್ಮಿಕ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಹಿಂದಿನ ಪ್ರಕರಣಗಳನ್ನು ನಾವು ನೋಡಿದ್ದೇವೆ, ಯಾವುದೇ ಒಂದು ಧಾರ್ಮಿಕ ಮುಖಂಡನ ತೆಜೋವಧೆ ನಡೆಯಿತು ಎಂದರೆ.ಸಮಾಜ ಅದನ್ನು ಪೂರ್ಣ ಪ್ರಮಾಣ ನಂಬುವ ಪ್ರಯತ್ನ ಮಾಡುತ್ತದೆ ಇಂತಹ ಪ್ರಕರಣ ಯಾರು ಎಬ್ಬಿಸುತ್ತಾರೆ ಎಂಬುವಂತದ್ದೇ ನಿಗೂಢ.ಒಂದು ಹೆಣ್ಣಿನ ಆರೋಪ, ಹಣದ ಆರೋಪ, ಕೊಲೆಯೆ ಆರೋಪ ಹೀಗೆ ಯಾವುದಾದರೂ ಒಂದು ಆರೋಪ ಎಬ್ಬಿಸುತ್ತಾರೆ.ಹಿಂದೆ ವಿವೇಕಾನಂದರ ತೆಜೋವಧೆ ನಡೆಯಿತು. ಬುದ್ದ, ಬಸವಣ್ಣ ಮಹಾವೀರ ಅವರ ಕಾಲದಲ್ಲೂ ತೆಜೋ ವಧೆ ನಡೆಯಿತು. ಅದೇ ರೀತಿಯಾಗಿ ಈಗ ವೀರೇಂದ್ರ ಹೆಗಡೆಯವರ ತೇಜವುದೇ ಮಾಡಲು ಹೊರಟಿದ್ದಾರೆ ಎಂದು ವಿಜಯಪುರದಲ್ಲಿ ಶನಿವಾರ ಮಧ್ಯಾಹ್ನ 1ಗಂಟೆಗೆ ದಿಂಗಾಲೇಶ್ವರ ಶ್ರೀಗಳು ಹೇಳಿದರು.