ಚಿಂತಾಮಣಿ ನಗರದಿಂದ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಭಾನುವಾರ ಮಾಜಿ ಉಪಸಭಾಪತಿ ಜೆಕೆ ಕೃಷ್ಣಾರೆಡ್ಡಿರವರ ನೇತೃತ್ವದಲ್ಲಿ ಸತ್ಯ ಯಾತ್ರೆದ ಪ್ರಯುಕ್ತ ಧರ್ಮಸ್ಥಳಕ್ಕೆ ಜೆಡಿಎಸ್ ಕಾರ್ಯಕರ್ತರು ಹೊರಟರು.ಇನ್ನು ಕಾರುಗಳ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಮುಖಂಡರು, ಕೆಲವರು ಷಡ್ಯಂತ್ರವನ್ನು ನಡೆಸಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಧರ್ಮಸ್ಥಳಕ್ಕೆ ಕಳಂಕ ತರುತ್ತಿದ್ದಾರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.