ಪ್ರೀತಿಸಿದ ಯುವತಿ ಮದುವೆಗೆ ಒಪ್ಪದ ಹಿನ್ನೆಲೆ ಯುವಕ ನೋರ್ವ ಬ್ಲೇಡ್ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಹೀಗೆ ಯತ್ನಿಸಿರುವ ಘಟನೆ ಬುಧವಾರ ಶಿವಮೊಗ್ಗ ನಗರದ ಪೊಲೀಸ್ ಚೌಕೆ ಬಳಿ ನಡೆದಿದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ ಬೆಂಗಳೂರಿನ ನಿವಾಸಿ 25 ವರ್ಷದ ಮಣಿ ಎಂದು ತಿಳಿದುಬಂದಿದೆ.ಶಿವಮೊಗ್ಗದಲ್ಲಿ ಕಲ್ಯಾಣ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅನುಷಾ ಯುವಕ ವ್ಯಸನಿ ಎಂದು ತಿಳಿದ ಹಿನ್ನೆಲೆ ಮದುವೆಗೆ ಒಪ್ಪದ ಕಾರಣ ಮಣಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಆತನನ್ನ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.