ಹಿಂದೂಗಳ ಹಬ್ಬಗಳನ್ನು ಹತ್ತಿಕ್ಕಲು ಡಿಜೆ ಬ್ಯಾನ್ ಮಾಡಿದ್ದಾರೆ: ನಗರದಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಿಂದೂಗಳ ಹಬ್ಬಗಳನ್ನು ಹತ್ತಿಕ್ಕಲು ಗಣೇಶ ಹಬ್ಬಕ್ಕೆ ಡಿಜೆ ಬ್ಯಾನ್ ಮಾಡಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಕಿಡಿ ಕಾರಿದರು. ದಾವಣಗೆರೆ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ನಮ್ಮ ಆತ್ಮೀಯ ಸ್ನೇಹಿತರು ಕಲಾಕರರು ಕಲಾವಿದರು. ಅಲ್ಪ ಸಂಖ್ಯಾತರನ್ನ ಓಲೈಸಿ ಹಿಂದುಗಳು ದೂರವಾಗುತ್ತಿದ್ದಾರೆ ಎಂದು ಎಚ್ಚೆತ್ತು ಆರ್ ಎಸ್ ಎಸ್ ಗೀತೆ ಹಾಡಿದ್ದಾರೆ. ಧರ್ಮಸ್ಥಳ ಶಾಪ ಸರ್ಕಾರಕ್ಕೆ ತಟ್ಟುತ್ತೆ ಅನ್ನೋ ಕಾರಣಕ್ಕೆ ನಮಸ್ತೆ ಸದಾ ವತ್ಸಲೆ ಅಂತ ಡಿಕೆಶಿ ನಾಟಕವಾಡುತ್ತಿದ್ದಾರೆ ಎಂದರು.