ಕುರುಗೋಡು : ಕಳೆದ ಹಲವಾರು ವರ್ಷಗಳಿಂದ ಕಳ್ಳತನ ಹಾಗೂ ಅಪಘಾತಗಳಂತಹ ಘಟನೆಗಳು ಪತ್ತೆಹಚ್ಚಲು ಅಗತ್ಯವಾದ ಸಿ.ಸಿ ಕ್ಯಾಮರಾಗಳ ಕೊರತೆ ಇತ್ತು. ಈ ಸಮಸ್ಯೆಗೆ ಇಂದು ಕುರುಗೋಡು ಪುರಸಭೆ ದಿಟ್ಟ ನಿರ್ಧಾರ ಕೈಗೊಂಡಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲು ಪುರಸಭೆಯ ನಿಧಿಯಿಂದ ₹14,43,759 ಮೊತ್ತವನ್ನು ಜಿಲ್ಲಾ ಎಸ್.ಪಿ. ಶೋಭಾರಾಣಿ ಅವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಆಗಸ್ಟ್ 29, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಾಹಿತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿಗಳು, ಸಿಪಿಐ ಹಾಗೂ ಸಬ್ ಇನ್ಸ್‌ಪೆಕ್ಟರ್ ಹ