ಮಳವಳ್ಳಿ : ಮದ್ದೂರಿನಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾಜ್೯ ಘಟನೆಗಳನ್ನು ಖಂಡಿಸಿ ಜೆಡಿಎಸ್ , ಬಿಜೆಪಿ ಮೈತ್ರಿ ಕೂಟ ಗುರುವಾರ ಮಳವಳ್ಳಿ ತಾಲ್ಲೂಕು ಬಂದ್ ಗೆ ಕರೆ ನೀಡಿದೆ. ಮೈತ್ರಿ ಕೂಟದ ಮುಖಂಡರ ಸಭೆಯ ನಂತರ ಮಂಗಳವಾರ ಸಾಯಂಕಾಲ 5 ಗಂಟೆ ಸಮಯದ ಲ್ಲಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಡಾ. ಕೆ ಅನ್ನದಾನಿ ಅವರು ಮದ್ದೂರಿನಲ್ಲಿ ಭಾನುವಾರ ಸಂಜೆ ನಡೆದ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ ನಡೆಸಿರುವ ಅನ್ಯ ಕೋಮಿನ ಕೆಲ ದುಷ್ಕರ್ಮಿ ಗಳ ಕೃತ್ಯ ಖಂಡನೀಯ ಎಂದರು.