ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಗ್ರಾಹಕರಿಂದ ಕೆನರಾ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆನರಾ ಬ್ಯಾಂಕ್ ಗ್ರಾಹಕರಿಗೆ ವಿವಿಧ ಸಂಘಟನೆಗಳು ಸಾಥ್ ನೀಡಿದವು. ಕಳ್ಳತನವಾದ ಬಂಗಾರದ ಇವತ್ತಿನ ಮಾರುಕಟ್ಟೆ ದರ ನೀಡುವಂತೆ ಗ್ರಾಹಕರ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು. ಗ್ರಾಹಕರಿಗೆ ಬಂಗಾರದ ಬೆಲೆ ನೀಡುವಲ್ಲಿ ತಾರತಮ್ಯವಾಗಿದೆ. ಗ್ರಾಹಕರಿಗೆ ಕೋಟಿಗಟ್ಟಲೆ ಹಣ ವಂಚನೆ ಆಗುತ್ತೆ ಎಂದು ಆರೋಪಿಸಿದರು.