ಮೊಳಕಾಲ್ಮುರು:-ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ರಾಯಾಪುರ ಗ್ರಾಮದ ವಿವಿಧೇಡೇ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಗ್ರಹಗಳನ್ನು ಭಕ್ತಿಪೂರ್ವಕವಾಗಿ ಪೂಜೆ ಮಾಡಿದ ನಂತರ ವಿಸರ್ಜನೆ ಮಾಡಲಾಯಿತು. ಗ್ರಾಮದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ಮತ್ತು ಶ್ರೀ ಬಸವೇಶ್ವರ ಶ್ರೇಯೋಭಿವೃದ್ಧಿ ಸಮಿತಿಯಿಂದ ಮೂರು ದಿನಗಳ ಕಾಲ ಗಣಪನನ್ನು ಪ್ರತಿಷ್ಠಾಪಿಸಿ ನಾನಾ ಧಾರ್ಮಿಕ ಪೂಜೆ ವಿಧಿ ವಿಧಾನಗಳನ್ನು ಭಕ್ತಿ ಪೂರ್ವಕವಾಗಿ ಮಾಡಲಾಯಿತು.ಶುಕ್ರವಾರದಂದು ವಿಸರ್ಜನೆಗೆ ಮುನ್ನ ಗಣೇಶನಿಗೆ ಮಹಾಪೂಜೆ, ಆರತಿ, ಪ್ರಸಾದ ಸಮರ್ಪಣೆ ಮಾಡಲಾಯಿತು. ವಿಸರ್ಜನೆ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.