ಶಾಹ್ ಹ್ಯಾಪಿನೆಸ್ ಅರ್ಜೆಂಟ್ ಕೇರ್ ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್ ನ್ನು ಸದ್ಗುರು ಸಾಯಿ ಮಧುಸೂದನ್ ರವರು ಇಂದು ಲೋಕಾರ್ಪಣೆಯನ್ನು ಮಾಡಿದರು.ಈ ವೇಳೆ ಮಾತನಾಡಿದ ಅವರು,ಒಂದು ಜಗತ್ತು, ಒಂದು ಕುಟುಂಬ ಪ್ರತಿಷ್ಠಾನವು ಕ್ಯಾಲಿಫೋರ್ನಿಯಾ ಮೂಲದ ದತ್ತಿ ಸಂಸ್ಥೆಯಾದ 'ಶಾಹ ಹ್ಯಾಪಿನೆಸ್ ಫೌಂಡೇಷನ್' ಹಾಗೂ ಸರ್ವಮಂಗಳ್ ಕುಟುಂಬ ದತ್ತಿಯ ಸಹಯೋಗದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಆರೋಗ್ಯ ಕೇಂದ್ರ ನಿರ್ಮಿಸಿದ್ದು, ಇದನ್ನು ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯು ನಿರ್ವಹಿಸಲಿದೆ. ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ ಸಮೂಹದ ಭಾಗವಾಗಲಿದೆ ಎಂದರು.