ಹನೂರು: ತಾಲ್ಲೂಕಿನ ಡಿ.ಎಂ. ಸಮುದ್ರ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಕುರಿ ಬಲಿಯಾಗಿರುವ ಘಟನೆ ನಡೆದಿದೆ. ಬೈರನಾಥ ಗ್ರಾಮದ ರೈತ ಗುರುಮಲ್ಲಪ್ಪ (50) ಅವರಿಗೆ ಸೇರಿದ ಕುರಿಯೊಂದನ್ನು ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿ ಕೊಂದುಹಾಕಿರುವ ಘಟನೆ ಗ್ರಾಮದಲ್ಲಿ ಭೀತಿಯ ವಾತಾವರಣವನ್ನುಂಟುಮಾಡಿದೆ. ಘಟನೆಯಿಂದಾಗಿ ಗುರುಮಲ್ಲಪ್ಪ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಘಟನೆಗಳು ಪುನರಾವೃತವಾಗುತ್ತಿವೆ ಎಂಬ ಆತಂಕದಿಂದ, ಸ್ಥಳೀಯರು ಹಾಗೂ ಕೃಷಿಕರು ತಮ್ಮ ಜಾನುವಾರುಗಳನ್ನು ರಕ್ಷಿಸಲು ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ