ಹನೂರು: ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಬಗ್ಗೆ ಹಗುರವಾಗಿಮಾತನಾಡಿರುವುದನ್ನು ಖಂಡಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯ ವೇಳೆ, ರೈತ ಸಂಘಟನೆಯ ತಾಲೂಕು ಅದ್ಯಕ್ಷ ಅಮ್ಜದಖಾನ್ ಸ್ಥಳೀಯ ಶಾಸಕರ ವಿರುದ್ಧವೂ ಆಕ್ರೋಶದ ಧ್ವನಿ ಎತ್ತಿದರು. ಅಜ್ಜಿಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ರೈತರು, ಡಿಕೆ ಶಿವಕುಮಾರ್ ಅವರು ರಾಮನಗರದಲ್ಲಿ ರೈತರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿದರು. ಡಿಕೆಸಿ ಕೂಡಲೆ ರೈತರಿಗೆ ಕ್ಷಮೆ ಕೇಳಬೇಕು”ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಈ ವೇಳೆ ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಶಾಸಕ ಮಂಜುನಾಥ್ ವಿರುದ್ದವೂ ಕೂಡ ದ್ವನಿ ಎತ್ತಿದ್ದರು