ಕೋಟ್೯ಗೆ ಬಂದ ಮಹಿಳೆ ಮೇಲೆ ನಾಯಿ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಕೋಟ್೯ ಆವರಣದಲ್ಲಿ ಜರುಗಿದೆ. ರೆಸ್ಟ್ ರೂಂ ನಿಂದ ಹೊರಗೆ ಬರುತಿದ್ದಂತೆ ಮಹಿಳೆ ಮೇಲೆ ಶ್ವಾನ ಎರಗಿ ದಾಳಿ ಮಾಡಿದೆ. ಬೀದಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ನರಳಾಟ ನಡೆಸಿದ್ದಾರೆ.ಮಹಿಳೆ ಮುಖವನ್ನು ಕಚ್ಚಿ ನಾಯಿ ಸಂಪೂರ್ಣ ಗಾಯ ಮಾಡಿದೆ. ತಿಪಟೂರು ಗ್ರಾಮದ ಬೀರಸಂದ್ರದವರಾದ (35) ಗಂಗೂಬಾಯಿ ಗಾಯಗೊಂಡ ಮಹಿಳೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳುಲು ಯತ್ನಿಸಿದಷ್ಟು ಪದೇ ಪದೇ ಮಹಿಳೆಯ ಮೇಲೆ ಶ್ವಾನ ದಾಳಿ ಮಾಡಿದೆ. ಮಹಿಳೆ ಕಿರಿಚಾಟ.. ರಕ್ತದಿಂದ ನರಳುತಿದ್ದ ನೋಡಿ ಕೂಡಲೇ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಶ್ವಾನದ ದಾಳಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.