ಮಂಗಳವಾರ ಮಧ್ಯಾಹ್ನ 12:30 ರ ಸುಮಾರಿಗೆ ಸದಾಶಿವನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಭೇಟಿ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ದೇವಾಡಿಗ ಸಂಘದ ದೇವಾಡಿ ಸಂಘದ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ನಂತರ ಜನರಲ್ ರಾಜಕೀಯ ಚರ್ಚೆ ಮಾಡಿದ್ದೇವೆ. ಎಸ್ಐಟಿ ನೇಮಕ ಮಾಡಿದ್ದಾರೆ. ನಾವೆಲ್ಲ ಜವಾಬ್ದಾರಿ ಉಳ್ಳವರಾಗಿರೋದ್ರಿಂದ ಎಸ್ಐಟಿ ವರದಿ ಬರ್ಲಿ, ಆಮೇಲೆ ನೋಡೋಣ ಎಂದರು. ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಷಡ್ಯಂತ್ರ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಇವೆಲ್ಲ ವಾತಾವರಣ ಕೆಡಿಸೋದೇ ಬಿಜೆಪಿಯವರು, ಧರ್ಮಸ್ಥಳದವರೇ ಎಸ್ಐಟಿಯನ್ನ ಸ್ವಾಗತ ಮಾಡಿದ್ದಾರೆ. ವರದಿ ಬರಲಿ ಅಲ್ಲಿವರೆಗೂ ಮಾತಾಡಲ್ಲ ಅಂತ ಹೇಳಿದ್ದಾರೆ,