ತಾಲೂಕಿನ ಹೆಚ್ ಮಲ್ಲಂಡಹಳ್ಳಿ ಗ್ರಾಮದ ರೈತನ ಕೊತ್ತಂಬರಿ ಸೊಪ್ಪಿನ ತೋಟದಲ್ಲಿ ಟ್ರಾಕ್ಟರ್ ಗೆ ಸಿಲುಕಿ ಬೃಹತ್ ಹೆಬ್ಬಾವು ಸಾವನ್ನಪ್ಪಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ರೈತನೊಬ್ಬಕೊತ್ತಂಬರಿ ಸೊಪ್ಪಿಗೆ ಬೆಲೆಯಿಲ್ಲ ಎಂದು ಟ್ರಾಕ್ಟರ್ ನಲ್ಲಿ ನಾಶ ಪಡಿಸುವ ವೇಳೆ ಆಕಸ್ಮಿಕವಾಗಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ಈ ವೇಳೆ ಟ್ರಾಕ್ಟರ್ ಚಾಲಕ ನೋಡದೆ ಹೆಬ್ಬಾವು ಸಮೇತ ರೋಟರ್ ಹೊಡೆದ ಪರಿಣಾಮ ಹೆಬ್ಬಾವಿಗೆ ಗಂಭೀರ ಗಾಯವಾಗಿ ಸಾವನ್ನಪಿದೆ. ನಂತರ ಹೆಬ್ಬಾವನ್ನ ರಕ್ಷಣೆ ಮಾಡಲು ಹೋದ ಉರಗ ತಜ್ಞ ಸ್ನೇಕ್ ಆನಂದ್ ಜೀವಿ ಹೆಬ್ಬಾವಿನ ಬದುಕಿಸಲು ಪ್ರಯತ್ನಿಸಿದರು ಹೆಬ್ಬಾವು ಸಾವನ್ನಪ್ಪಿದೆ. ಈ ವೇಳೆ ಮಾತನಾಡಿದ ಉರಗ ತಜ್ಞ ಆನಂದ್ ಜೀವಿ ಅವರು ರೈತರ ಜಮೀನಿನಲ್ಲಿ ಹುಷರಾಗಿ ನೋಡಿ ಉಳಮೆ ಮಾಡಬೇಕು ಎಂದ್ರು