ವೃದ್ದರೊಬ್ಬರಿಗೆ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಳ ಮಾಡಿಸಿಕೊಡುವುದಾಗಿ ನಂಬಿಸಿ 21 ಲಕ್ಷ ರೂ.ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಯಾದವಗಿರಿ ಬಡಾವಣೆಯ ವಿವೇಕಾನಂದ ರಸ್ತೆಯ ಗೌಸ್ (76) ಹಣ ಕಳೆದುಕೊಂಡ ವೃದ್ದರು.ಎರಡು ದಿನಗಳ ಹಿಂದೆ ಕ್ರಡಿಟ್ ಕಾರ್ಡ್ ನ ಲಿಮಿಟ್ ಹೆಚ್ಚಿಸಿ ಕೊಡುವುದಾಗಿ ಗೌಸ್ ಅವರ ಮೊಬೈಲ್ ಗೆ ಎಸ್. ಎಂ.ಎಸ್ ಬಂದಿದೆ. ಇದನ್ನ ನಂಬಿದ ಗೌಸ್ ಅವರು ತಮ್ಮ ಇಮೇಲ್,ಕ್ರೆಡಿಟ್ ಕಾರ್ಡ್ ಸಂಖ್ಯೆ,,ಜನ್ಮದಿನಾಂಕ ಹಾಗೂ ಇನ್ನಿತರೆ ವಿವರಗಳನ್ನು ಒದಗಿಸಿದ್ದಾರೆ.