ತಮಿಳುನಾಡಿನಲ್ಲಿ ಜನಿಸಿದ ಅಂಜನಪ್ಪ ಸ್ವಾಮೀಜಿ ಅವರು ಅವಿದ್ಯಾವಂತರಾಗಿದ್ದರು, ಬಡತನದಲ್ಲಿಯೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಬಂದು ನೆಲೆಸಿದರು.ವೇದ ಉಪನಿಷತ್ ಗಳನ್ನ ಅರ್ಥ ಮಾಡಿಕೊಂಡು ಅವಧೂತರಾದರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಹುಲಿನಾಯ್ಕರ್ ಹೇಳಿದರು.ತುಮಕೂರು ನಗರದ ಶ್ರೀದೇವಿ ಮೆಡಿಕಲ್ ಕಾಲೇಜು ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 1.15 ರ ಸಮಯದಲ್ಲಿ ದುರ್ಗಾಂಬಿಕಾ ಸೇವಾ ಟ್ರಸ್ಟ್ ಹಾಗೂ ಶ್ರೀ ದೇವಿ ಶಿಕ್ಷಣ ಸಂಸ್ಥೆ ಟ್ರಸ್ಟ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವಿ ರಮಣ ಮಹರ್ಷಿ ಪುರಸ್ಕಾರ ಹಾಗೂ ಗ್ರಂಥ ಲೋಕಾರ್ಪಣೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.