ಶರನ್ನವರಾತ್ರಿ ಅಂಗವಾಗಿ ನಗರದಲ್ಲಿ ವಿಜಯದಶಮಿ ಹಬ್ಬವನ್ನು ಶಮೀ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುತ್ತೈದೆ ಮಹಿಳೆಯರು ಸಡಗರ ಸಂಭ್ರಮದಿಂದ ಆಚರಿಸಿದರು. ನವರಾತ್ರಿ ಹಬ್ಬದ ಅಂಗವಾಗಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ದೇವಿ ಆರಾಧನೆ ಮತ್ತು ಉಪಾಸನೆ ಮಾಡಿದ ಭಕ್ತರು, ವಿಜಯದಶಮಿ ದಿನದಂದು ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಹೆಣ್ಣುಮಕ್ಕಳು ಸಮೀಪದ ಬನ್ನಿ ಮಂಟಪಕ್ಕೆ ತರಳಿ ಹೂವು, ಹಣ್ಣು, ಕಾಯಿ, ನೈವೇದ್ಯವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಕೆಲ ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬಿ ಅರಿಶಿನ ಕುಂಕುಮ ವಿನಿಮಯ ಮಾಡಿಕೊಂಡು ಭಕ್ತಿಯನ್ನು ಸಮರ್ಪಿಸಿದರು.