ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಹಾಗೂ ಅವಹೇಳನ ಪೋಸ್ಟ್ ಹಿನ್ನೆಲೆಯಲ್ಲಿ "hindu_adalita_davanagere" ಎಂಬ ಇನ್ಸ್ಟಾಗ್ರಾಂ ಪೇಜ್ ಅಡ್ಮಿನ್ ಮತ್ತು ಪ್ರಚೋದನಕಾರಿ ಪೋಸ್ಟ್ ಹಂಚಿಕೊಂಡ ವ್ಯಕ್ತಿಗಳ ವಿರುದ್ಧ ದಾವಣಗೆರೆ ನಗರದ ಆಜಾದ್ ನಗರ ಪೊಲೀಸರು ಸ್ವಯಂ ದೂರು ದಾಖಲಿಸಿದ್ದಾರೆ. ದಾವಣಗೆರೆ ನಗರದ ಆರ್‌ಎಂಸಿ ರಸ್ತೆಯ ಮಟ್ಟಿಕಲ್ಲು ಬಳಿ ಫ್ಲೆಕ್ಸ್ ಕಟ್ಟಿರುವ ವಿಚಾರದಲ್ಲಿ ಎರಡು ಧರ್ಮದ ಯುವಕರ ಮಧ್ಯೆ ನಡೆದ ವಾದ-ವಿವಾದದ ವೀಡಿಯೋ ಚಿತ್ರೀಕ ರಣ ಮಾಡಿಕೊಂಡು ಅವಹೇಳನ ಪೋಸ್ಟ್ ಮಾಡಲಾಗಿದೆ.