ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆ ಸಾಗರ ತಾಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತದತ್ತ ಪ್ರವಾಸಿಗರು ಮುಖ ಮಾಡಿದ್ದಾರೆ ಇನ್ನ ಜೋಗ ಜಲಪಾತ ನೋಡಲು ಬರುತ್ತಿರುವ ಕೆಲ ಯುವಕರು ಹುಚ್ಚಾಟ ಮೆರೆಯುತ್ತಿದ್ದಾರೆ. ಫೋಟೋ ಗಿಳಿಗಾಗಿ ಪ್ರವಾಸಿಗರ ಸುರಕ್ಷತೆಗಾಗಿ ಜೋಗ ಜಲಪಾತದ ಸಮೀಪದಲ್ಲಿ ಅಳವಡಿಸಿರುವ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಹುಚ್ಚಾಟ ತೋರುತ್ತಿದ್ದಾರೆ. ಹೆಚ್ಚು ಕಡಿಮೆಯಾಗಿ ಕಾಲು ಜಾರಿದರೆ ಪ್ರಪಾತಕ್ಕೆ ಬೀಳುವ ಸಾಧ್ಯತೆಯಿದ್ದು, ಅನಾಹುತ ಸಂಭವಿಸು ಮೊದಲೇ ಸಾಗರ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಕುರಿತಾದ ಮಾಹಿತಿ ಶುಕ್ರವಾರ ಲಭ್ಯವಾಗಿದೆ.