ನನಗೆ ಸೇರಿದಂತಹ ಕಾರಿಗೆ ನಕಲಿ ನಂಬರ್ ಪ್ಲೇಟ್ ಹಾಕೊಂಡು ವ್ಯಕ್ತಿಯೊಬ್ಬ ಓಡಾಡ್ತಾ ಇದ್ದ ಆತನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಅಂತ ಹೇಳಿ ಮಾಜಿ ಶಾಸಕ ಮಂಜುನಾಥ್ ಒತ್ತಾಯಿಸಿದರು. ಬಿಡದಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿಸಿಎಂ ಮನೆಯ ಆಜುಬಾಜಿನಲ್ಲಿ ನ ನನ್ನ ಕಾರಿಗೆ ನಕಲಿ ನಂಬರ್ ಹಾಕಿಕೊಂಡು ಓಡಾಟ ಮಾಡುತ್ತಿರುವ ವಿಚಾರ ನನಗೆ ತಿಳಿದಿದೆ. ಚುನಾವಣೆ ಸಂದರ್ಭದಲ್ಲಿ ನನ್ನ ಸ್ನೇಹಿತನಿಗೆ ಆ ಕಾರನ್ನ ನೀಡಿದ್ದೆ ಆದರೆ ಆತ ಕಾರನ್ನ ಹಿಂತಿರುಗಿಸುತ್ತದೆ ನಕಲಿ ನಂಬರ್ ಹಾಕೊಂಡು ಓಡಾಟ ಮಾಡುತ್ತಿದ್ದ. ಕಾರಿನ ಅಗತ್ಯ ದಾಖಲೆಗಳು ನನ್ನ ಬಳಿ ಇದ್ದು ಅದನ್ನ ವಕೀಲರ ಮೂಲಕ ಪೊಲೀಸ್ ಠಾಣೆಗೆ ಸಲ್ಲಿಕೆ ಮಾಡಿಸಿದ್ದೇನೆ ಅಂತ ತಿಳಿಸಿದರು.