Download Now Banner

This browser does not support the video element.

ಮೈಸೂರು: ಹೊಸ ಬದುಕಿನ ಮೊದಲ ಹೆಜ್ಜೆಯಲ್ಲಿ ಮಾನವೀಯತೆಯ ಬೆಳಕು ಚೆಲ್ಲಿದ ನವ ಜೋಡಿಗಳಿಂದ ನಗರದಲ್ಲಿ ನೇತ್ರದಾನ

Mysuru, Mysuru | Sep 5, 2025
ಮೈಸೂರಿನಲ್ಲಿ ನವ ಜೋಡಿಗಳಿಂದ ನೇತ್ರದಾನ ಮೈಸೂರು: ಮೈಸೂರಿನ ನಿವಾಸಿ ಚಂದನ್ ಮತ್ತು ಲಾವಣ್ಯ ಇಂದು ಸರಳ ಮದುವೆ ಮೂಲಕ ಹೊಸ ಬದುಕಿನ ಹೆಜ್ಜೆ ಇಟ್ಟಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಪ್ರೀತಿಯಲ್ಲಿ ಒಂದಾಗಿದ್ದ ಈ ಜೋಡಿ, ಇಂದಿನ ದಿನ ಮನೆಯವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಚಾಲನೆ ನೀಡಿದರು. ಮದುವೆ ಎಂದರೆ ಕೇವಲ ಸಂಬಂಧಿಕ–ಸ್ನೇಹಿತರಿಗೆ ಔತಣಕೂಟ, ಆನಂದ–ಆಡಂಬರವೆಂದುಕೊಳ್ಳುವ ಅನೇಕ ಯುವ ದಂಪತಿಗಳಿಗೆ, ಈ ಜೋಡಿ ನಿಜಕ್ಕೂ ಮಾದರಿಯಾಗಿದ್ದಾರೆ. ಮಾಂಗಲ್ಯ ಧಾರಣೆ ಬಳಿಕ ನವ ದಂಪತಿ ಇಬ್ಬರೂ ಸ್ವಇಚ್ಛೆಯಿಂದಲೇ ಮೈಸೂರಿನ ಅಗ್ರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲೇ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿದರು. ಮುಂದಿನ ಪೀಳಿಗೆಯ ನಾಲ್ಕು ಮಂದಿಗೆ ನೆರವಾಗಲಿ
Read More News
T & CPrivacy PolicyContact Us