ಕೂಡ್ಲಿಗಿ: ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯಿಂದ ತಾಲೂಕಿನ ಬಡೇಲಡಕು ಗ್ರಾಮದ ದಲಿತ ಕಾಲೋನಿಯಲ್ಲಿ ಡಿಎಸ್ಎಸ್ ಗ್ರಾಮ ಘಟಕದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಗ್ರಾಮದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಮುದಾಯದ ಸದಸ್ಯರು ಈ ಐತಿಹಾಸಿಕ ಕ್ಷಣವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಚ್ ದುರುಗೇಶ್ ತಾಲೂಕ ಸಂಘಟನಾ ಸಂಚಾಲಕರು ಮಾತನಾಡಿ ನಾಗಮೋಹನದಾಸ್ ವರದಿಯಲ್ಲಿ ಒಳಮೀಸಲಾತಿ ವಿಂಗಡಣೆ ಮಾಡಲಾಗಿತ್ತು. ಆದರೆ, ಸರ್ಕಾರ 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇ 6 ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿದ್ದು ಸಂತಸ ತಂದಿದೆ ಎಂದರು.