ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಹುಣಸೀಕೋಟೆ ಗ್ರಾಮದ ಬೆಟ್ಟದ ಬಳಿ ಕಲ್ಲು ಸ್ಫೋಟಿಸುವ ವೇಳೆ ಗುಡ್ಡ ಕುಸಿದು ಒಬ್ಬ ವ್ಯಕ್ತಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾರೆ. ಹುಣಸೀಕೋಟೆ ಗ್ರಾಮದ ಕಲ್ಲು ಕುಟಿಗ ಮಂಜುನಾಥ್ (35) ಕಲ್ಲುಬಂಡೆ ಕೆಳಗೆ ಸಿಲುಕಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಆತ ಮೃತಪಟ್ಟಿರುವ ಶಂಕೆ ಇದೆ. ಹೊರ ರಾಜ್ಯದ ಕಾರ್ಮಿಕ ನವೀನ್ ಎಂಬುವರನ್ನು ಚಿಕಿತ್ಸೆಗಾಗಿ ಕೋಲಾರ ಆಸ್ಪ್ರತೆಗೆ ದಾಖಲಾಗಿಸಲಾಗಿದೆ. ಕಾರ್ಮಿಕ ನವೀನ್ ಜಿಲೆಟಿನ್ ಕಡ್ಡಿ ಇಟ್ಟು ಕಲ್ಲು ಸ್ಫೋಟ ಮಾಡಲು ಮಂಗಳವಾರ ಮುಂದಾಗಿದ್ದಾರೆ. ಆಗ ಗುಡ್ಡ ಕುಸಿತ ಸಂಭವಿಸಿದೆ.ಮಂಗಳವಾರ ಮಾಸ್ತಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.