ಸುಮಾರು 40-50 ವರ್ಷಗಳಿಂದ ರಸ್ತೆಯಾಗಿ ಉಪಯೋಗಿಸುತ್ತಿದ್ದ ಜಾಗವನ್ನು ಗ್ರಾಮ ಪಂಚಾಯ್ತಿ ಅದ್ಯಕ್ಷರು ನಕಲಿ ದಾಖ ಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿರುವ ಘಟನೆ ವೆಲಗಲಬುರ್ರೆ ಗ್ರಾಮದಲ್ಲಿ ನಡೆದಿದೆ.ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದ ನಿವಾಸಿ ಆಂಜನಪ್ಪ ಸೋಮವಾರ ಮಾದ್ಯಮಗಳಿಗೆ ಪ್ರತಿಕ್ರಯಿಸಿ ಸುಮಾರು ವರ್ಷಗಳಿಂದ ನಾವು ಈ ಗ್ರಾಮದಲ್ಲಿ ವಾಸಿಸುತ್ತಿದ್ದು,ಗ್ರಾಮ ಪಂಚಾಯ್ತಿಅಧ್ಯಕ್ಷರಾದ ರತ್ನಮ್ಮ ಎಂಬುವರು ಅಕ್ರಮವಾಗಿ ದಾಖಲೆಗಳನ್ನ ಸೃಷ್ಟಿಸಿ ರಸ್ತೆಗೆ ಕಲ್ಲು ಕೂಚಗಳನ್ನು ಹಾಕಿದ್ದಾರೆ ನಮಗೆ ರಸ್ತೆ ಇಲ್ಲದೆ ಪರೆದಾಡುವಂತಾಗಿದೆ.ಮಳೆಬಂದರೆ ನೀರು ಮನೆಗಳಿಗೆ ನುಗ್ಗುತ್ತವೆ,ಈ ಕುರಿತು ನಾವು ಗ್ರಾ ಪಂ,ಇಒ, ಪೊಲಿಸರಿಗೆ ಮಾಹಿತಿ ನೀಡಿದ್ದೆವೆ ಎಂದ್ರು