ಆರು ತಿಂಗಳ ಒಳಗೆ ದೊಡ್ಡ ಅಂಕಂಡಹಳ್ಳಿ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ನಿರ್ಮಾಣ ಆಗಬೇಕು,ನಂತರ ಇಲ್ಲಿ ಬಿಎಂಸಿ ಘಟಕವನ್ನು ಸ್ಥಾಪನೆ ಮಾಡುತ್ತೇನೆ ಎಂದು ಬುಧವಾರ ಕೋಮುಲ್ ಒಕ್ಕೂಟದ ನಿರ್ದೇಶಕ ಹಾಗೂ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ದೊಡ್ಡ ಅಂಕಂಡಹಳ್ಳಿ ಗ್ರಾಮದಲ್ಲಿ ನೂತನವಾಗಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಶಂಕು ಸ್ಥಾಪನೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಈ ಭಾಗದಲ್ಲಿ ಹೆಚ್ಚಿಗೆ ಹಾಲು ಉತ್ಪಾದನೆ ಆಗಬೇಕು, ಈ ಗ್ರಾಮ ಪಟ್ಟಣಕ್ಕೆ ಹತ್ತಿರವಾಗಿದೆ. ಈಗ ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಅದು ಮುಂದಿನ ದಿನಗಳಲ್ಲಿ ಎರಡು ಸಾವಿರ ಆಗಬೇಕು ಆಗ ನಿಮ್ಮ ಸಂಘಕ್ಕು ಲಾಭವು ಹೆಚ್ಚಾಗಿ ಸಿಗುತ್ತದೆ ಎಂದರು