ಕಲಬುರಗಿ : ಕಲಬುರಗಿ ನಗರದ ಹೀರಾಪುರ ಬಡಾವಣೆಯಲ್ಲಿ ಆ24 ರಂದು ಮರೆಪ್ಪ ಕಟ್ಟಿಮನಿ ಎಂಬಾತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆರೋಪಿಗಳನ್ನ ಬಂಧಿಸಲಾಗಿದೆಯೆಂದು ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಹೇಳಿದ್ದಾರೆ.. ಸೆ2 ರಂದು ಬೆಳಗ್ಗೆ 11.30 ಕ್ಕೆ ನಗರದಲ್ಲಿ ಮಾತನಾಡಿದ ಅವರು, ಅನ್ಯಕೋಮಿನ ಯುವತಿಯನ್ನ ಪ್ರೀತಿ ಮಾಡ್ತಿರೋದಕ್ಕೆ ಕೊಲೆ ಮಾಡಿರೋದಾಗಿ ಸುಳ್ಳು ಹೇಳಿ ತನಿಖೆ ದಿಕ್ಕು ತಪ್ಪಿಸಲು ಆರೋಪಿಗಳು ಯತ್ನಿಸಿದ್ದು, ಪ್ರಕರಣ ಸಂಬಂಧ, ಪವನ್, ಸಂಜಯ್, ರಾಹುಲ್, ಲಕ್ಷ್ಮಿಕಾಂತ್, ಆದರ್ಶ್ ಸೇರಿದಂತೆ ಐವರನ್ನ ಬಂಧಿಸಲಾಗಿದೆಯೆಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ