Download Now Banner

This browser does not support the video element.

ಚಿತ್ತಾಪುರ: ಭಂಕಲಗಾ ಗ್ರಾಮದಲ್ಲಿ ಗೋಡೆ ಕುಸಿದು 18 ಮೇಕೆಗಳ ಸಾವು

Chitapur, Kalaburagi | Aug 30, 2025
ಕಲಬುರಗಿ : ನಿರಂತರವಾಗಿ ಸುರಿದ ಮಳೆಯ ತೇವಾಂಶಗೊಂಡಿದ್ದ ಕೊಟ್ಟಿಗೆಯ ಗೋಡೆ ಕುಸಿದು 18 ಮೇಕೆಗಳು ದುರ್ಮರಣಕ್ಕಿಡಾದ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಭಂಕಲಗಾ ಗ್ರಾಮದಲ್ಲಿ ನಡೆದಿದ್ದು, ಆ30 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಗ್ರಾಮದ ಮಾಳಪ್ಪ ಪೂಜಾರಿ ಎಂಬುವರು ಮಳೆ ಬರ್ತಿರೋವಾಗ ಕೊಟ್ಟಿಗೆಯಲ್ಲಿ ಕುರಿಗಳನ್ನ ಹಾಕಿದ್ದಾರೆ.. ಈ ವೇಳೆ ತೇವಾಂಶಗೊಂಡಿದ್ದ ಗೋಡೆ ಕುಸಿದು 18 ಮೇಕೆಗಳು ಕಲ್ಲು ಮಣ್ಣಿನಡಿ ಉಸಿರುಗಟ್ಟಿ ಮೃತಪಟ್ಟಿವೆ.. ಲಕ್ಷಾಂತರ ರೂಪಾಯಿ ಮೌಲ್ಯದ ಮೇಕೆಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ತಹಶಿಲ್ದಾರ್ ಹಾಗೂ ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More News
T & CPrivacy PolicyContact Us