ವಿಪಕ್ಷ ನಾಯಕ ಆರ್ ಅಶೋಕ್ ಅವರು ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪದ್ಮನಾಭ ನಗರದಲ್ಲಿ ಮದ್ದೂರು ವಿಚಾರದಲ್ಲಿ ಸಿ.ಟಿ ರವಿ ವಿರುದ್ಧ FIR ಹಾಕಿರೋ ವಿಚಾರಕ್ಕೆ ಸಂಬಂಧಿಸಿ ಮಾತನಾಡಿ, ಮಂಡ್ಯದ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿ, ಹಲ್ಲೆ ಮಾಡಿದ್ರು. ಅದರ ವಿರುದ್ಧ ಹೋರಾಟ ಮಾಡಿದ್ದೆವು. ಮಂಡ್ಯದ ಇತಿಹಾಸದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದು ಇದೇ ಮೊದಲು. ನಾವು ಅಲ್ಲಿ ಬೆಂಬಲ ಕೊಡಲು ಹೋಗಿದ್ದೋ. ಹಿಂದೂಗಳನ್ನ ಅಟ್ಟಾಡಿಸಿ ಹೊಡೆದಿದ್ರು, ಅವರಿಗೆ ಸಾಂತ್ವಾನ ಹೇಳಲು ಹೋಗಿದ್ದೆವು. ಅಲ್ಲಿರೋದು ದಲಿತರು. ಅಲ್ಲಿ ಯಾರಾದ್ರೂ ಸತ್ತರೆ ಹೆಣ ತೆಗೆದುಕೊಂಡು ಹೋಗುವಾಗ ತಮಟೆ ಹೊಡೆಯುವಂತಿಲ್ಲ. ಸಿ.ಟಿ ರವಿ ಮಾತಾಡಿರೋದು ಉದ್ರೇಕಕಾರಿ ಏನಲ್ಲ. ಅಣ್ಣ ಅಂದ್ರೆ ಅಣ್ಣ ಅಂತೀವಿ,