ಕೇಣಿಯಲ್ಲಿ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಧ್ಯಾನ 2 ಗಂಟೆಯವರೆಗೆ ಜಿಲ್ಲಾಡಳಿತದಿಂದ ಸಾರ್ವಜನಿಕ ಆವಾಲು ಸಭೆ ಅಂಕೋಲಾ ಪಟ್ಟಣದಲ್ಲಿ ನಡೆಯಿತು. ಕಂಪನಿ ಬೇಕು ಬೇಡ ಎನ್ನುವುದರ ಬಗ್ಗೆ ಸಾಕಷ್ಟು ಅಹವಾಲುಗಳನ್ನು ಜಿಲ್ಲಾಡಳಿತ ಸ್ವೀಕರಿಸಿದೆ. ಈಸೆಂದ್ರದಲ್ಲಿ ಕಂಪನಿಯವರು ಬಂದರು ನಿರ್ಮಾಣದಿಂದ ಆಗುವಂಥ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು. ಸ್ಥಳೀಯ ಮೀನುಗಾರರು ಸಹ ತಮಗೆ ಯೋಜನೆ ಬೇಡ ಎಂದು ಆಕ್ರೋಶ ಸಹ ವ್ಯಕ್ತಪಡಿಸಿದರು. ಉತ್ತರ ಕನ್ನಡದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರ ನೇತೃತ್ವದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಿತು.