ನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಇಲ್ಲಿನ ಶಿವಪುರ ಬಡಾವಣೆಯಿಂದ ಹೊರಡಬೇಕಾಗಿದ್ದ ಮೆರವಣಿಗೆಯಲ್ಲಿ ತರಲು ಖಡ್ಗದ ಮಾದರಿ ಪ್ರತಿಕೃತಿ ಸಿದ್ಧಪಡಿಸುತ್ತಿರುವುದು ಕಂಡ ಪೊಲೀಸ್ ಅಧಿಕಾರಿಗಳು ಗುರುವಾರ ಮಧ್ಯಾಹ್ನ 2ಕ್ಕೆ ಸದರಿ ಪ್ರತಿಕೃತಿ ವಶಕ್ಕೆ ಪಡೆದಿದ್ದಾರೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿವೈಎಸ್ಪಿ ಜಿಎಸ್ ನ್ಯಾಮಗೌಡ ನೇತೃತ್ವದಲ್ಲಿ ನಗರದಲ್ಲಿ ಪಥ ಸಂಚಲನ ನಡೆಸುವಾಗ ಪ್ರಕರಣ ನಡೆದಿದೆ.